ಪ್ರತಿವರ್ಷದಂತೆ ಈ ವರ್ಷ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಿದ ಮಾತೃಭೂಮಿ ಸೇವಾ ಫೌಂಡೇಷನ್ ತಂಡ.

ಪ್ರತಿವರ್ಷದಂತೆ ಈ ವರ್ಷ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಿದ ಮಾತೃಭೂಮಿ ಸೇವಾ ಫೌಂಡೇಷನ್ ತಂಡ.

ಪ್ರತಿ ವರ್ಷದಂತೆ ಈ ವರ್ಷ ಮಾತೃಭೂಮಿ ಸೇವಾ ಫೌಂಡೇಷನ್ ಈ ಬಾರಿ 4 ಜಿಲ್ಲೆಗಳಲ್ಲಿ ವಿಭಿನ್ನ ರೀತಿಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಮೊದಲಿಗೆ ಮಾತೃಭೂಮಿ ಸೇವಾ ಫೌಂಡೇಷನ್ ಮಂಡ್ಯ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ಕಾರ್ಯಕರ್ತರು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಇರುವ ಆರ್ಯ ಪಬ್ಲಿಕ್ ಸ್ಕೂಲ್  ಮತ್ತು ಪ್ಯಾರಮೆಡಿಲ್ ವಿದ್ಯಾರ್ಥಿಗಳನ್ನು ಜೊತೆಸೇರಿಸಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಾಗೂ ಸೋಮನಹಳ್ಳಿಯ ಸುತ್ತ ಜಾತ ನಡೆಸಿ ಗಿಡಗಳನ್ನು ನೆಡಲಾಹಿತು.

ಇದೆ ಸಂಧರ್ಭದಲ್ಲಿ ಶಾಲೆ ಆಡಳಿತ ಮಂಡಳಿಯವರಾದ ದೇವರಾಜ್ ಮತ್ತು ಹರೀಶ್ ಕುಮಾರ್ ರವರು ಮಾತನಾಡಿ 1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ.

ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ಧಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಮ್ಯಾಗ್ಡೋನಲ್ಸ್ ಮುದ್ದಗೆರೆಯ ಸಿಬ್ಬಂದಿ ಶಿವಕುಮಾರ್, ಮಾತೃಭೂಮಿ ಸೇವಾ ಫೌಂಡೇಷನ್  ಗಗನ್ ಗೌಡ, ಪ್ರತಾಪ್,  ಸಂಜಯ್ ಹಾಗೂ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತಿ ಇದ್ದರು.

ಎರಡನೆಯದಾಗಿ ಬೀದರ ಜಿಲ್ಲೆಯ ಮನ್ನಾಕೆಹಳ್ಳಿಯ ಸರ್ಕಾರಿ ಶಾಲೆಯ ಜೊತೆಸೇರಿ ಮಾತೃಭೂಮಿ ಸೇವಾ ಫೌಂಡೇಷನ್ ಬೀದರ ಕಾರ್ಯಕರ್ತರು ಇಂದು ಗಿಡಗಳನ್ನು ನೆಡುವ ಮೂಲಕ ಪರಿಸರ ದಿವನ್ನು ಆಚರಿಸಲಾಯಿತು.ಇದೆ ಸಂದರ್ಭದಲ್ಲಿ ಬೀದರ ಜಿಲ್ಲೆಯ ಮಾತೃಭೂಮಿ ಕಾರ್ಯಕರ್ತ ರಮೇಶ್ ರವರು ಮಕ್ಕಳನ್ನು ಉದ್ದೇಶಿಸಿ ಸಾಲುಮರದ ತಿಮ್ಮಕ್ಕನವರ ಜೀವನ ಕಥೆಯನ್ನು ವಿವರಿಸಿದರು.

ಮೂರನೇ ಕಾರ್ಯಕ್ರಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಕ್ಷಳ ಬಿ ಯಲ್ಲಿ ಮಾತೃಭೂಮಿ ಸೇವಾ ಫೌಡೇಷನ್ ಬೀದರ ಜಿಲ್ಲೆಯ ಕಾರ್ಯಕರ್ತರು ಶಾಲೆಯ ಸ್ವಚ್ಛತೆ ಮಾಡಿ ಮಕ್ಕಳ ಜೊತೆ ಗಿಡ ನೆಡುವ ಮೂಲಕ ವಿಶಿಷ್ಠವಾಗಿ ಪರಿಸರ ದಿನವನ್ನು ಆಚರಿಸಲಾಯಿತು.ಇದೆ ಸಂದರ್ಭದಲ್ಲಿ ಮಾತೃಭೂಮಿ ಬೀದರ್ ಸಂಚಾಲಕ ರಾಜು ಮೇತ್ರಿ ಮಾತನಾಡಿ ಪ್ರತಿದಿನ ನಗರಗಳಿಗೆ ಸೇರುತ್ತಿರುವ ಜನ, ಏರುತ್ತಿರುವ ತ್ಯಾಜ್ಯ, ಇದ್ದಬದ್ದ ಮರಗಳನ್ನು ಕಡಿದು ಕಟ್ಟುತ್ತಿರುವ ವಾಣಿಜ್ಯ ಕಟ್ಟಡಗಳು.

ದಿನಂಪ್ರತಿ 1200ದಷ್ಟು ಸೇರಿಕೊಳ್ಳುವ ವಾಹನಗಳು. ಇದು ಹೀಗೆ ಮುಂದುವರಿದರೆ ಮುಂದೊಂದುದಿನ ಮುಂದಿನ ಪೀಳಿಗೆಗಳಿಗೆ ’ಪರಿಸರ’, ’ಹಸಿರು’ ಎಂದರೇನು ಎಂಬುದೇ ಗೊತ್ತಾಗದ ಸ್ಥಿತಿ ತಲುಪುವ ಕಾಲ ದೂರವಿಲ್ಲ. ಅಷ್ಟೊತ್ತಿಗೆ ಉಸಿರಾಟಕ್ಕೂ ನಿರ್ಮಲವಾದ ಗಾಳಿ ಇಲ್ಲದೇ ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ ಎಂದರು.

ನಾಲ್ಕನೇ ಕಾರ್ಯಕ್ರಮ ಉಮಲೂಟಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಾತೃಭೂಮಿ ಸೇವಾ ಫೌಂಡೇಷನ್ ರಾಯಚೂರು ಸಂಚಾಲಕ ಸೋಮನಾಥ್ ಜಾಗಿದಾರ್ ಮಾತನಾಡಿ ಪರಿಸರ, ಪಕೃತಿ ನಮಗೆ ಯಾವುದನ್ನು ನೀಡಲ್ಲ. ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಟ್ಟಿದ್ದೇವೆ. ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ.

ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ನಿಷ್ಕಾಳಜಿ ನಮ್ಮಲ್ಲಿ ಇಲ್ಲ ಎಂದರು. ಮಾತೃಭೂಮಿಯ ಕಾರ್ಯಕರ್ತರಾದ ಬಾನುಗೌಡ, ವಿರುಪಣ್ಣ, ಮಹೇಶ್, ಉಲುಗೇಶ, ವಿಜಯ್  ಮತ್ತಿತ್ತರು ಉಪಸ್ಥಿತಿ  ಇದ್ದರು.

Leave a Comment

Your email address will not be published. Required fields are marked *