Year: 2018

Archive Posts Listed On This Page

ಸದಾ ಮಾತೃಭೂಮಿಯ ಸೇವಾ ಕಾರ್ಯದಲ್ಲಿ ಈ ಯುವ ಪಡೆ.

ನಮ್ಮ ಭಾರತ ಹಿಂದಿನಿಂದಲೂ ಖ್ಯಾತಿಹೊಂದಿರುವುದು ನಮ್ಮ ಭಾರತೀಯರ ಮಾನವೀಯತೆಯ,ಸೇವೆಯ ಹಾಗೂ ತ್ಯಾಗದಡಿಯಲ್ಲಿ ಕಟ್ಟಿದ ನಾವೆಲ್ಲರೂ ತಾಯಿ ಭಾರತಿಯ ಮಕ್ಕಳೆಂಬ ಬದ್ರಬುನಾದಿಯ ತಳಪಾಯದ ಚಿಂತನೆಯಲ್ಲಿ.ಊಟ ನಾವು ಮಾಡಿಲ್ಲದಿದ್ದರೂ ಊಟದ ಸಮಯದಲ್ಲಿ ಊಟವಾಯಿತಾ? ಎಂದು ಪ್ರತಿಯೊಬ್ಬ ಪರಿಚಯದವರು ಸಿಕ್ಕಿದಾಗಲೂ ನಾವು ಪ್ರಶ್ನಿಸುವ ಸಾಮಾನ್ಯ ಮಾತು.ಇನ್ನೊಬ್ಬ ಊಟ ಮಾಡಿದರೋ ಇಲ್ವೋ ಎನ್ನುವುದನ್ನು ತಿಳಿದು ನಮಗೇನಾಗಬೇಕು? ಎಂದು ಕೆಲವರು ಚಿಂತಿಸಿದರೆ,ಊಟ ಮಾಡಿದ್ರೋ ಇಲ್ವೋ ಎನ್ನುವ ದೊಡ್ಡ ಹೃದಯ ಮಾನವೀಯತೆ ಈತನಿಗಿದೆ ಎನ್ನುವವರು ಕೆಲವರು.ಎಲ್ಲವೂ ನಾವು ನೋಡುವ ದೃಷ್ಟಿಯಲ್ಲಿದೆ,ದೃಷ್ಟಿ ಸರಿಯಾಗಿದ್ದಾಗ ಸೃಷ್ಟಿಯೂ ಸರಿಯಾಗಿಯೇ ಕಾಣುತ್ತದೆ.

ಯುವಕರು ತಂಡಕಟ್ಟಿ ಕ್ರಿಕೆಟ್ ಆಡುವುದನ್ನೋ,ಕಬಡ್ಡಿ,ವಾಲಿಬಾಲ್,ಜೂಜು,ಒಟ್ಟು ಸೇರಿ ಹರಟೆ,ಸಿನಿಮಾ ನೋಡುವುದನ್ನು ನಾವು ಸಾಮಾನ್ಯವಾಗಿ ಎಲ್ಲಕಡೆಯೂ ಕಾಣುತ್ತೇವೆ.ಆದರೆ ಮಾತ್ರೃಭೂಮಿಗೆ ಪ್ರತಿಕ್ಷಣವೂ ತುಡಿಯುವ ಯುವಕರ ತಂಡವನ್ನು ನೀವು ನೋಡಿದ್ದೀರಾ?ಇವರ ಬಗ್ಗೆ ಕೇಳಿದ್ದೀರಾ? ಇವರ ಬಗ್ಗೆ ಓದದಿದ್ದರೆ ಓದಿ ತಿಳಿಯಲೇಬೇಕು,ಓದುವುದರಿಂದ ಸ್ಪೂರ್ತಿಯೋ,ಪ್ರೇರಣೆಯೋ ಅಥವಾ ನಮಗೊಂದು ಸಹಾಯ ಮಾಡಲು ಯೋಗ್ಯವೆನಿಸಿದ ಕೆಲವು ಯುವಕರ ತಂಡದಲ್ಲಿ ಸೇರಿಕೊಂಡು ನಮ್ಮ ಕೈಲಾದಂತೆ ಸಹಕರಿಸಲೂಬಹುದು ಏನೂ ಆಗದಿದ್ದರೆ,ಬೆನ್ನುತಟ್ಟಿ ಹುರಿದುಂಬಿಸಿ ಪ್ರೋತ್ಸಾಹಿಸಬಹುದು.

ಮಾತೃಭೂಮಿ ಫೌಂಡೇಷನ್ ಪ್ರಾರಂಭವಾಗಿದ್ದು 2013ರಲ್ಲಿ ಅಲ್ಲಿಂದ ಇಲ್ಲಿಯವರೆಗೂ ನಿರಂತರ ಚಿಕ್ಕಪುಟ್ಟ ಹಾಗೂ ದೊಡ್ಡಮಟ್ಟದ ವಿವಿಧ ಸೇವಾಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ಬಡವರಿಗೆ ಚಿಕಿತ್ಸೆಗೆ ಸಹಾಯ,ಆಶ್ರಯವಿಲ್ಲದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ,ಬೆಳಕಿಲ್ಲದ ಮನೆಗೆ ಬೆಳಕು ನೀಡುವುದು,ನೆರೆಬಂದಾಗ ಪರಿಹಾರ ನಿಧಿ, ಪರಿಸರ ರಕ್ಷಣೆ,ಸನಾತನ ಧರ್ಮದ ರಕ್ಷಣೆಗಾಗಿ ಸೇವಾಕಾರ್ಯಗಳು,


ಬರ ಬಂದಾಗ ಪ್ರಾಣಿಪಕ್ಷಿಗಳಿಗೆ ನೀರು,ಆಹಾರ. ಯುವ ಸಮಾಜಕ್ಕೆ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತುವುದು,ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದು,ಮಕ್ಕಳಿಗೆ ರಾಷ್ಟ್ರಪ್ರೇಮ,ರಾಷ್ಟ್ರೀಯ ಚಿಂತನೆಗಳನ್ನು ಬಿತ್ತುವುದು,ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯಧನ, ಹಿರಿಯರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಸಮಾಜಕ್ಕೆ ಪರಿಚಯಿಸುವುದು ಕ್ವಿಝ್ ಪ್ರಬಂದ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಶಾಲಾ ಮಕ್ಕಳಲ್ಲಿ ಸ್ಪರ್ದೆಯೇರ್ಪಡಿಸಿ ಜ್ಞಾನ ಹೆಚ್ಚಿಸುವುದು, ಸೇರಿದಂತೆ ಇನ್ನೂ ಹಲವು ಸೇವೆಗಳಲ್ಲಿ ತಮ್ಮದೇ ಮನಸ್ಥಿತಿಯ ಹಲವು ಯುವಕರನ್ನು ಒಂದುಗೂಡಿಸಿ,ಧಾನಿಗಳ,ವಿಶಾಲ ಹೃದಯಿಗಳ ಸಹಾಯದಿಂದ ನಿರಂತರ ತಾವು ಜನಿಸಿದ ಮಾತೃಭೂಮಿಯ ಸೇವೆಗೈಯ್ಯುತ್ತಾ ಭಾರತವನ್ನು ಸಧೃಡಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.


ಜನಸಂಖ್ಯೆ ಭಾರತದ ದೊಡ್ಡ ಸಮಸ್ಯೆಯೆಂದು ಪುಸ್ತಕದಲ್ಲಿ ನಾವು ಓದಿದ್ದೇವೆ,ಆದರೆ ಜನಸಂಖ್ಯೆ ಸಮಸ್ಯೆಯಲ್ಲ ಅದು ನಮ್ಮ ಭಾರತದ ಸಂಪನ್ಮೂಲವೆಂದು ನಾವು ಅರ್ಥೈಸಿಕೊಳ್ಳುವುದೇ ಇಲ್ಲ.ಭಾರತದಲ್ಲಿ ಪ್ರತಿಯೊಬ್ಬರು ಒಂದೊಂದು ಬಡಕುಟುಂಬಕ್ಕೆ ಸಹಾಯಮಾಡುವ ಮನಸ್ಸು ಮಾಡಿದರೆ ಭಾರತ ಜನಸಂಖ್ಯೆಯಲ್ಲಿ ಮಾತ್ರವಲ್ಲ,ಎಲ್ಲಾ ರೀತಿಯಲ್ಲೂ ಮುಂದುವರಿದ ದೇಶವೆನ್ನಿಸುವುದರಲ್ಲಿ ಸಂಶಯವಿಲ್ಲ.ನಾವು ಎಲ್ಲೊ ಒಂದಷ್ಟು ಉತ್ತಮ ಕೆಲಸಗಳಲ್ಲಿ ಚಿಂತನೆಗಳಲ್ಲಿ ತೊಡಗಿದವರೇ ಆದರೂ ನಾವು ಎಲ್ಲೋ ಒಗ್ಗಟ್ಟು ಎನ್ನುವ ಶಬ್ದಜೋಡಣೆಯ ಅರ್ಥವನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದ್ದೇವೆ.ಒಗ್ಗಟ್ಟು ಎಂದರೆ ಒಂದು ಸಂಘಟನೆಯನ್ನೋ ಅಥವಾ ವ್ಯಕ್ತಿಯನ್ನೋ ಎತ್ತರಕ್ಕೇರಿಸುವುದಲ್ಲಾ,ಬದಲಾಗಿ ನಮ್ಮ ಭಾರತದ ಸಂತಪರಂಪರೆ ನಮಗೆ ತೋರಿದ ಮಾರ್ಗದರ್ಶನನ್ನು, ಉತ್ತಮ.


ವಿಚಾರವನ್ನು ತನ್ನದೇ ರೀತಿಯಲ್ಲಿ ಸಮಾಜದ ಒಳಿತಿಗೆ ಬಳಸಿಕೊಳ್ಳುವುದಾಗಿದೆ.ಇಲ್ಲಿ ಎಲ್ಲರೂ ಇದೇ ಸಂಘಟನೆಯಲ್ಲಿರಬೇಕು,ಹೀಗೆ ಕೆಲಸಮಾಡಬೇಕು ಎನ್ನುವ ಕಟ್ಟುಪಾಡೇನಿಲ್ಲ ಏನೇ ಮಾಡಿದರೂ ಅದು ನಮ್ಮ ದೇಶದ ಒಳಿತಿಗಾಗಿರಬೇಕು ಎಂಬುದಷ್ಟೇ ಮುಖ್ಯ.ಈ ಮಾತಿಗೆ ಪೂರಕವಾಗಿ ತನ್ನದೇ ಛಾಪನ್ನು ಸಮಾಜದಲ್ಲಿ ಮೂಡಿಸುತ್ತಾ ಬೆಳೆಯುತ್ತಾ ದೇಶವನ್ನು ಬೆಳೆಸುವತ್ತ ದೃಷ್ಟಿಬೀರಿದ ಹಲವಾರು ಸಂಘಟನೆಗಳಲ್ಲಿ ಮಾತೃಭೂಮಿ ಸೇವಾ ಫೌಂಡೇಷನ್ ಕೂಡ ಒಂದು.ಎಲ್ಲರನ್ನೂ ಗೌರವಿಸುತ್ತಾ,ಬೆಳೆಸುತ್ತಾ ಮಾಡುವವರಿಂದ ಸಹಾಯ ಪಡೆದು,ಸಹಾಯ ಪಡೆಯಲಿಚ್ಚಿಸುವವರಿಗೆ ತಲುಪಿಸುತ್ತಾ ದಾರಿತಪ್ಪುತ್ತಿರುವ ಯುವ ಸಮಾಜಕ್ಕೆ ಯುವಸಮಾಜ ಮನಸ್ಸು ಮಾಡಿದರೆ ವಿಶಿಷ್ಟರೀತಿಯಲ್ಲಿ ಸಮಾಜಕ್ಕೇನಾದರೂ ಕೊಡುಗೆ ನೀಡಬಹುದೆಂಬುದನ್ನು ತಿಳಿಸಿದ ತಿಳಿಸುವ ಸಂಸ್ಥೆ.

ತಮಿಳ್ನಾಡಿನಲ್ಲಿ ನೆರೆ ಬಂದಾಗ ಆಹಾರ ಹಂಚಲು ಅಲ್ಲಿಗೆ ತೆರಳಿ ಬೋಟ್ ಮೂಲಕ ಆಹಾರದ ಪೊಟ್ಟಣವನ್ನು ಹಂಚಿ ಬಂದಿದ್ದರು.ಕರ್ನಾಟಕದ ಕಾವೇರಿ ಸಮಸ್ಯೆ ವಿಷಯದಲ್ಲಿ ತಕರಾರುಗಳಿದ್ದರೂ ಕಷ್ಟದ ಸಂಧರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಸಂಕಷ್ಟದಲ್ಲಿರುವವರಿಗೆ ತನ್ನ ಕೈಲಾದ ಸಹಾಯ ನೀಡಬೇಕೆಂದು ಮುಂದೆಬಂದ ಹಲವು ಸಂಘಟನೆಗಳ ಪೈಕಿ ಈ ಯುವಕರ “ಮಾತೃಭೂಮಿ ಸೇವಾ ಫೌಂಡೇಶನ್ ಕೂಡ ಒಂದು.ಸ್ಲಮ್ ಗಳಿಗೆ ಹೋಗಿ ಅಲ್ಲಿಯ ಜನರ ಜೀವನದ ಬಗ್ಗೆ ತಿಳಿದುಕೊಂಡು ಇವರಿಗಾಗಿ ನಾವೇನು ಮಾಡಬಹುದೆಂದು ಯೋಚಿಸಿ,ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳನ್ನು ಅವರಜೊತೆ ಆಚರಿಸುವುದು,ತಮ್ಮ ತಂಡದ ಇತರ ಸ್ನೇಹಿತರ ಹುಟ್ಟುಹಬ್ಬಗಳನ್ನು ರಕ್ತದಾನ,ಕಾರ್ನಿಯಾ ರೋಗದ ಚಿಕಿತ್ಸೆ ಮತ್ತು ಮಾಹಿತಿ ಉಚಿತವಾಗಿ ಕೊಡುವ ಮೂಲಕ,ಕಣ್ಣುದಾನ ಸೇರಿದಂತೆ ಇತರ ವೈಧ್ಯಕೀಯ ನೆರವುಗಳನ್ನು ಸದಾ ಈಗಲೂ ಮಾಡುತ್ತಿದ್ದಾರೆ.


ಇಂಗ್ಲೀಷ್ ಅಕ್ಷರಮಾಲೆಗಳಿಗೆ ದೇಶಪ್ರೇಮಿಗಳ ಹೆಸರನ್ನು ಕೊಟ್ಟು ವೀಡಿಯೋಮೂಲಕ ಮಕ್ಕಳಿಗೆ ಮೊದಲ ಅಕ್ಷರದಿಂದಲೇ ರಾಷ್ಟ್ರಭಕ್ತರ ಪರಿಚಯ ಹಾಗೆಯೇ ಬಡತನವೆನ್ನುವುದು ಶಾಪವಲ್ಲವೆಂಬ ವೀಡಿಯೋ ದೃಶ್ಯಗಳ ಮೂಲಕ ಧೈರ್ಯ ಸ್ಪೂರ್ತಿ ಹಾಗೂ ಎಲ್ಲಾ ಸನ್ನಿವೇಶಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬುವ ವೀಡಿಯೋಗಳನ್ನು ಬಹಳಷ್ಟು ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿರುವುದು ಕೂಡ ಸಾಮಾಜಿಕ ತಾಣಗಳ ಮೂಲಕ ಸಮಾಜ ಸೇವೆ ಮಾಡುವುದಕ್ಕೊಂದು ಉದಾಹರಣೆಯೆನ್ನಬಹುದು. ಅನಾಥಾಶ್ರಮ,ವೃದ್ದಾಶ್ರಮ,ಹಾಗೂ ಬಡವರ ಗುಡಿಸಲುಗಳಲ್ಲಿ,

ಸ್ಲಮ್ ಗಳಲ್ಲಿ,ನೂರಾರು ಸೇವಾಕಾರ್ಯಗಳನ್ನು ಮಾಡುತ್ತಾ ಮುಂದುವರಿಯುವ ಈ ಯುವಕರು ಇತ್ತೀಚೆಗೆ ಬಾಲಕೋಟೆ ಜಿಲ್ಲೆ ಹನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ಕಳೆದ 16ವರ್ಷಗಳಿಂದ ವಿಧ್ಯುತ್ ಇಲ್ಲದೆ,ಕತ್ತಲೆಯಲ್ಲಿ ಕಾಲಕಳೆಯುತ್ತಿದ್ದ 40ಮನೆಗಳಿಗೆ ಸೋಲಾರ್ ಲೈಟ್ ಹಂಚುವ ಮೂಲಕ ಆ ಮನೆಗೆ ಬೆಳಕಾದರು. ಉಚಿತ ಕಂಪ್ಯೂಟರ್ ತರಬೇತಿ,ಉಚಿತ ಟೈಲರಿಂಗ್ ತರಬೇತಿ,ಯೋದ ನಮನ,ಕಾರ್ಯಕ್ರಮಗಳು ನಿರಂತರ ನಡೆಸುತ್ತಾ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರನ್ನು ಗುರುತಿಸಿ ಬೆನ್ನುತಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.

ಮಾತೃಭೂಮಿಯ ಸೇವೆಗಾಗಿರುವ ಮಾತೃಭೂಮಿಯ ಹಲವು ವಿಷಯಗಳನ್ನು ತಿಳಿದುಕೊಂಡಾಗ ನಿಮಗೂ ಈ ಗುಂಪಿನಲ್ಲಿ ಸೇರಿಕೊಳ್ಳುವ ಆಸಕ್ತಿಯಿದ್ದರೆ ಇಲ್ಲೊಂದು ಫೊನ್ ನಂಬರ್ ಇದೆ ಸಂಪರ್ಕಿಸಿ(ಮಹೇಶ್ ಮಾತೃಭೂಮಿ ಸೇವಾ ಫೌಂಡೇಶನ್ ಸಂಸ್ಥಾಪಕರು 9164881858) ಒಂದುವೇಳೆ ಇದರಲ್ಲಿ ಆಸಕ್ತಿಯಿಲ್ಲದಿದ್ದರೂ ಸೇವೆಗಳಲ್ಲಿ ತೊಡಗಿರುವ ಯುವಕರನ್ನು ಒಮ್ಮೆ ಪ್ರೀತಿಯಿಂದ ಹರಸಿ ಆಶೀರ್ವಧಿಸಿ. ಮಾತೃಭೂಮಿಯ ಎಲ್ಲಾ ಸಹೋದರರಿಗೂ ಶುಭಹಾರೈಕೆಗಳು ಇನ್ನಷ್ಟು ಮಾತೃಭೂಮಿಯ ಸೇವೆಯಲ್ಲಿ ತೊಡಗುವಂತೆ ಆ ಭಾರತಮಾತೆ ನಿಮ್ಮನ್ನು ಆಶೀರ್ವಧಿಸಲಿ.

ಬರಹ: ದಯಾ ಆಕಾಶ್ ಕಾಸರಗೋಡು

Read Details